Chorarigondu Kaala Lyricsಚೋರರಿಗೊಂದು ಕಾಲ ಸಾಹಿತ್ಯ

Movie
Mojugara Sogasugara (2020)
Singer
Mano
Music
Hamsalekha
Lyrics
Hamsalekha
Chorarigondu kaal song lyrics thumbnail

Chorarigondu Kaala Song Lyrics are penned by Hamsalekha. The song is sung by Manu. Chorarigondu Kaala Song lyrics are from the movie Mojugara Sogasugara starring Vishnuvardhan, Shruti, Sonakshi, Doddanna & Others. Mojugara Sogasugara released in 1995 and the movie is directed by Vijay. and produced by N. Kumar. The music for the movie is composed by Hamsalekha. Chorarigondu Kaala Song lyrics in Kannada and English is given below.

ಚೋರರಿಗೊಂದು ಕಾಲ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಮನು ರವರು. ಈ ಹಾಡು 1995 ಬಿಡುಗಡೆಯಾದ ವಿಷ್ಣುವರ್ಧನ್, ಶ್ರುತಿ, ಸೋನಾಕ್ಷಿ, & ದೊಡ್ಡಣ್ಣ ಅವರು ನಟಿಸಿದ ಮೋಜುಗಾರ ಸೊಗಸುಗಾರ ಚಿತ್ರದ ಹಾಡಾಗಿದೆ. ಚೋರರಿಗೊಂದು ಕಾಲ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಮೋಜುಗಾರ ಸೊಗಸುಗಾರ ಚಿತ್ರ ನಿರ್ದೇಶಿಸಿದವರು ವಿಜಯ್ ಮತ್ತು ನಿರ್ಮಾಪಕರು ಏನ್. ಕುಮಾರ್.

Chorarigondu Kaala video

ಚೋರರಿಗೊಂದು ಕಾಲ ಸಾಹಿತ್ಯ (Kannada)

ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕೂ ಒಂದು ಕಾಲ

ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೆ

ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕೂ ಒಂದು ಕಾಲ

ಸಹನೆ ಶರಣಾಗತಿ ಅಲ್ಲಾ
ಕರುಣೆ ಬಲಹೀನತೆ ಅಲ್ಲಾ
ಧರ್ಮ ದಯವಿರುವ ಸಾಗರ

ದುಷ್ಟಾ ನೀನೆಲ್ಲವು ಅಲ್ಲಾ
ನಿನಗೆ ಅಮೃತವು ಇಲ್ಲಾ
ನಾನೇ ನಿನ್ನ ನುಂಗೋ ನಾಗರ

ಒಳ್ಳೆ ಜನಕೆ ಒಳ್ಳೆ ತನಕೆ
ಕೇಳೋ ಮೂರ್ಖ ಸೋಲಿಲ್ಲ
ನಮ್ಮದೇ ಜಯಭೇರಿ

ನಿಮ್ಮಾ ಪಾಪದ ಬಿಂದಿಗೆಯಲ್ಲಿ
ಹೊಸ ಪಾಪಕೆ ಸ್ಥಳವಿಲ್ಲಾ
ನರಕಕೆ ಸವಾರಿ

ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕೂ ಒಂದು ಕಾಲ

ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೆ

ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕೂ ಒಂದು ಕಾಲ

ನೂರು ಕಲಿ ರಾಯನ ಕೈಲೀ
ಒಂದೇ ಒಂದಿರುವುದು ಖಡ್ಗ
ಅನ್ಯಾಯದ ಕಳೆಯ ಕಡಿಯಲು

ಭೂಮಿ ಮೇಲೆಲ್ಲಾ ಸುತ್ತಿ
ನಿಮ್ಮ ಕುಲದವರ ಕೆತ್ತಿ
ಬರಲು ಹೊತ್ತಾಯ್ತು ಕುಡು-ಗಗಲು

ನಿನ್ನಾ ಹೆಗಲೇ ನನ್ನಾ ಕುದುರೆ
ನಡಿ ನಾಕು ಕಾಲಲ್ಲಿ
ನಮ್ಮದೇ ರಣಭೇರಿ

ನಿಮ್ಮಾ ಗುಣವೇ ನಿಮ್ಮಾ ವೈರೀ
ನೀವೇ ನಿಮಗೆ ಯಮ ಪಾಶಾ
ನರಕಕೆ ಸವಾರಿ

ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕೂ ಒಂದು ಕಾಲ

ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೆ

ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕೂ ಒಂದು ಕಾಲ