Yaarigaagi Hele Lyricsಯಾರಿಗಾಗಿ ಹೇಳೇ ಸಾಹಿತ್ಯ

Movie
Solillada Saradara (1992)
Singer
Manjula Gururaj, K. S. Chithra
Music
Hamsalekha
Lyrics
Hamsalekha
Yaarigaagi Hele Lyrics thumbnail

Yaarigaagi Hele Lyrics are penned by Hamsalekha. The song is sung by Manjula Gururaj And K. S. Chitra. Yaarigaagi Hele lyrics are from the movie Solillada Saradara starring Ambareesh, Malashri, Bhavya, Doddanna, Mukhyamantri Chandru, Jaggesh, Mysore Lokesh And Others. Solillada Saradara released in 1992 and the movie is directed by Om Sai Prakash. and produced by K. Prabhakar. The music for the movie is composed by Hamsalekha. Yaarigaagi Hele lyrics in Kannada is given below.

ಯಾರಿಗಾಗಿ ಹೇಳೇ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಮಂಜುಳಾ ಗುರುರಾಜ್ ಮತ್ತು ಕೆ. ಎಸ್. ಚಿತ್ರ ರವರು. ಈ ಹಾಡು ೧೯೯೨ ಬಿಡುಗಡೆಯಾದ ಅಂಬರೀಷ್, ಮಾಲಾಶ್ರೀ, ಭವ್ಯ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಜಗ್ಗೇಶ್, ಮೈಸೂರ್ ಲೋಕೇಶ್, ಡಿಂಗ್ರಿ ನಾಗರಾಜ್, ಪದ್ಮ ಕುಂಟ, ಮತ್ತು ಕಾಮಿನಿಧರನ್ ಅವರು ನಟಿಸಿದ ಸೋಲಿಲ್ಲದ ಸರದಾರ ಚಿತ್ರದ ಹಾಡಾಗಿದೆ. ಯಾರಿಗಾಗಿ ಹೇಳೇ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಸೋಲಿಲ್ಲದ ಸರದಾರ ಚಿತ್ರ ನಿರ್ದೇಶಿಸಿದವರು ಓಂ ಸಾಯಿ ಪ್ರಕಾಶ್ ಮತ್ತು ನಿರ್ಮಾಪಕರು ಕೆ. ಪ್ರಭಾಕರ್.

Yaarigaagi Hele video

ಯಾರಿಗಾಗಿ ಹೇಳೇ ಸಾಹಿತ್ಯ (Kannada)

ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ನಿನ್ನ ಚಿತ್ತ ಚೋರನ ಸೊಗಸು ಹೇಳು ಹೇಗಿದೆ
ನಿನ್ನ ಚಿತ್ತ ಚೋರನ ಹೆಸರು ಹೇಳು ಏನಿದೇ

ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಹೆಣ್ಣು ತನ್ನ ಗಂಡಿನ ಹೆಸರ ಹೇಳಬಾರದು
ಅವನ ಚೆಲುವ ಹೇಳುವೇ ನೀನು ನಾಚಬಾರದು

ಕಾಮನ ಬಿಲ್ಲೋಳಗೆ ನೀಲಿಯ ರಂಗವನು
ಮಾಯದ ಮುಖ ಅವನದು…
ಕಾಡುವ ಚೆಲುವು ಅವನದು…

ರಾಜನು ಅವನಲ್ಲಾ ರಾಜರ ಗುರುವನು
ಪ್ರೇಮಕೆ ಉಸಿರುವನದು…
ದೇವರ ಹೆಸರವನದು…

ರವಿಕಾಂತಿ ಕಣ್ಣಿರುವ ನೋಟದವನು
ಬಲವೆಂಬ ರಾಮನಿಗೆ ತಮ್ಮನವನು
ಆ ರೂಪಕೆ ಯಾರು ಸಮರಿಲ್ಲಾ ಹೇಳಲೇ ಅವನ್ಯಾರು
ಆ ಹೆಸರಿಗೆ ಯಾರು ಎದುರಿಲ್ಲಾ ಹೇಳಲೇ ಅವನ್ಯಾರೂ

ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ನಿನ್ನ ಚಿತ್ತ ಚೋರನ ಸೊಗಸು ಹೇಳು ಹೇಗಿದೆ
ನಿನ್ನ ಚಿತ್ತ ಚೋರನ ಹೆಸರು ಹೇಳು ಏನಿದೇ

ನೀರಿನ ಅಲೆಮೇಲೆ ತೇಲುವ ಕಲೆ ಅವನು
ದೊರಕಿದೆ ಈ ಚೆಲುವಿಗೆ…
ಸಾಗರ ಮನೆ ಅವನಿಗೆ…

ಮಂತ್ರಿಯು ಅವನಲ್ಲಾ ತಂತ್ರದ ದೊರೆಯವನು
ಸಿಲುಕಿದ ಈ ಒಲವಿಗೆ…
ಸಾವಿರ ಹೆಸರು ಅವನಿಗೆ…

ನಗುವಲ್ಲೇ ನರನಾಡಿ ಮೀಟುವವನು
ಅಭಿಮನ್ಯು ಹೆಂಡತಿಗೇ ಮಾವನವನು
ಆ ಠೀವಿಗೆ ಜಗವೇ ವಸವಮ್ಮಾ ಶೋಕಲು ನನಗಾದೆ
ಆ ನಾಮಕೆ ಯುಗವೇ ಗುರುತಮ್ಮಾ ಒಲಿದರು ಮರುಳಾಗಿ

ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ನಿನ್ನ ಚಿತ್ತ ಚೋರನ ಸೊಗಸು ಹೇಳು ಹೇಗಿದೆ
ನಿನ್ನ ಚಿತ್ತ ಚೋರನ ಹೆಸರು ಹೇಳು ಏನಿದೇ

ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಹೆಣ್ಣು ತನ್ನ ಗಂಡಿನ ಹೆಸರ ಹೇಳಬಾರದು
ಅವನ ಚೆಲುವ ಹೇಳುವೇ ನೀನು ನಾಚಬಾರದು